ಯಲ್ಲಾಪುರ: ಇಸ್ಲಾಂಗಲ್ಲಿ ಹಾಗೂ ಕಾಳಮ್ಮ ನಗರದಲ್ಲಿ ನೂತನ ಅಂಗನವಾಡಿ ಕೇಂದ್ರಕ್ಕೆ ಶಾಸಕ ಹೆಬ್ಬಾರ್ ಚಾಲನೆ
ಯಲ್ಲಾಪುರ: ಪಟ್ಟಣದ ಇಸ್ಲಾಂ ಗಲ್ಲಿ ಹಾಗೂ ಕಾಳಮ್ಮ ನಗರದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ, ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಶ್ರೀದೇವಿ ಪಾಟೀಲ,ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷವಿ.ಎಸ್.ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಉಲ್ಲಾಸ್ ಶಾನಭಾಗ,ಪ.ಪಂ ಮಾಜಿ ಅಧ್ಯಕ್ಷರಾದ ನರ್ಮದಾ ನಾಯ್ಕ,ಸುನಂದಾ ದಾಸ್ ಉಪಾಧ್ಯಕ್ಷ ಅಮಿತ ಅಂಗಡಿ, ಕಾಂಗ್ರೆಸ್ ನಗರ ಘಟಕಾಧ್ಯಕ್ಷ ಸತೀಶ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು, ಪ.ಪಂ ಮಾಜಿ ಸದಸ್ಯರು,ಇತರರು ಉಪಸ್ಥಿತರಿದ್ದರು.