ಕುಂದಾಪುರ: ಜಡ್ಕಲ್ ಎಂಬಲ್ಲಿ ಸರಕಾರಿ ಹಾಡಿಯಲ್ಲಿ ಮಾನವನ ಮೂಳೆಗಳು ಪತ್ತೆ
ಹೊಸೂರು ಗ್ರಾಮದ ಜಡ್ಕಲ್ ಏರ್ ಎಂಬಲ್ಲಿಯ ಬೆಳೆಕೋಡ್ಲು ರಸ್ತೆಯ ಹತ್ತಿರ ಸರಕಾರಿ ಹಾಡಿಯಲ್ಲಿ ಮಾನವ ಮೂಳೆಗಳು ಪತ್ತೆಯಾಗಿದೆ.ಸ್ಥಳದಲ್ಲಿ ಮೂಳೆಯ ತುಂಡುಗಳ ಜೊತೆ ಒಂದು ಪ್ಯಾಂಟ್, ಶರ್ಟ್, ಒಂದು ಕೀ ಪ್ಯಾಡ್ ಮೊಬೈಲ್, ಒಂದು ಜೊತೆ ಚಪ್ಪಲಿ ಸಿಕ್ಕಿದೆ. ಅಲ್ಲೇ ಹತ್ತಿರದ ಮರದಲ್ಲಿ ನೈಲಾನ್ ಹಗ್ಗ ತುಂಡಾಗಿರುವುದು ಕಂಡುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.