ಕಲಬುರಗಿಯ ಶಹಾಬಾದ್ ರಿಂಗ್ ರಸ್ತೆ ಬಳಿ ನಿನ್ನೆ ತಡರಾತ್ರಿ ಭೀಮ್ ಆರ್ಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಹುಗ್ಗಿ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಅಜ್ಞಾತರು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಸತೀಶ್ ಹುಗ್ಗಿ ಮಾತನಾಡಿ, ಆರ್ಎಸ್ಎಸ್ ಪಥಸಂಚಲನ ವಿರುದ್ಧ ಹೋರಾಟ ನಡೆಸಿದ ನನಗೆ ಬೆದರಿಕೆ ತಂತ್ರ ರೂಪದಲ್ಲಿ ಈ ಕೃತ್ಯ ನಡೆದಿದೆ. ಇದರಲ್ಲಿ ಆರ್ಎಸ್ಎಸ್ ಪರ ಶಕ್ತಿಗಳ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆ ಪ್ರಾರಂಭವಾಗಿದೆ ಎಂದು ಶೆನಿವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ....