ಶ್ರೀನಿವಾಸಪುರ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದವತಿಯಿಂದ ಸರ್ವಸದಸ್ಯರ ಸಭೆ
ಸಭೆಯಲ್ಲಿ ಕೆಲ ರೈತರು ಸಲಹೆಗಳನ್ನು ನೀಡಿದ್ದು, ಅದರಂತೆ,ಕಾರ್ಯನಿರ್ವಹಿಸುವುದಾಗಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಲಕ್ಷ್ಮಣ ರೆಡ್ಡಿ ಭರವಸೆ ನೀಡಿದರು. ಪಟ್ಟಣದ ಡಿಸಿಸಿ ಬ್ಯಾಂಕ್‌ನ ಕಚೇರಿ ಮೇಲ್ಗಾದಲ್ಲಿ ಬುಧವಾರ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವತಿಯಿಂದ ನಡೆದ ಸರ್ವಸದಸ್ಯರ ಸಭೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಈ ಸಾಲಿನಲ್ಲಿ8.20 ಲಕ್ಷ ನಿವ್ವಳ ಲಾಭ ಬಂದಿದ್ದು , ಈ ಸಂಘದಿಂದ ಯಾವುದೇ ಕಾರಣಕ್ಕೂ ಸಾಲಕೊಡಲು ಸಾಧ್ಯವಿಲ್ಲ. ರೈತರಿಗೆ ಸಹಾಯ ಮಾಡಲು ರಸಗೊಬ್ಬರನ್ನು ತರಿಸಿ ಅವುಗಳನ್ನು ರೀಯಾತಿ ಧರದಲ್ಲಿ ಮಾರಾಟ ಮಾಡಿ ಸಂಘವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಲಹೆ ನೀಡಿದರು.