ಬೆಂಗಳೂರು ಪೂರ್ವ: ಹೊತ್ತಿ ಉರಿದ ಚಲಿಸುತ್ತಿದ್ದ ಬಿಎಂಟಿಸಿ ಬಸ್! ಬೆಂಕಿಯ ಕೆನ್ನಾಲಿಗೆಗೆ ಬಸ್ ಒಳಗಿದ್ದ 65 ಮಂದಿ ಶಾಕ್! HAL ನಲ್ಲಿ ನಡುಕ ಹುಟ್ಟಿಸಿದ BMTC
ಸೆಪ್ಟೆಂಬರ್ 15 ರಾತ್ರಿ 9 ಗಂಟೆ ಸುಮಾರಿಗೆ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ. ಸಾಕಷ್ಟು ಪ್ರಯಾಣಿಕರಿದ್ದ ಬಸ್ ಬೆಂಕಿ ಹತ್ತಿರುವುದು ಪ್ರಯಾಣಿಕರ ಎದೆ ಬಡಿತ ಹೆಚ್ಚಳ ಮಾಡಿತ್ತು. HAL ಸಿಗ್ನಲ್ ಸಮೀಪ ನಡೆದ ಘಟನೆ ಇದಾಗಿದ್ದು ಮೊದಲಿಗೆ ಇಂಜಿನ್ ಅಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಪ್ರಯಾಣಿಕರು & ನಿರ್ವಾಹಕರ ಸಮಯ ಪ್ರಜ್ಞೆಯಿಂದ ತಕ್ಷಣ ಪ್ರಯಾಣಿಕರ ಬಸ್ ಇಂದ ಇಳಿಸಲಾಯಿತು. ಪ್ರಯಾಣಿಕರು ಇಳಿದ ಕೆಲವೇ ಕ್ಷಣದಲ್ಲಿ ಬಸ್ ಹೊತ್ತಿ ಉರಿದಿದೆ