ಹುಬ್ಬಳ್ಳಿ:ಎಲ್ಲಾರು ಮಂತ್ರಿಯಾಗಬೇಕು ಎಂಬ ಇಚ್ಛೆ ಇದ್ದೆ ಇರುತ್ತದೆ ಆದರೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರು ಬೇಡ ಅನ್ನೋಲ್ಲ, ಎಲ್ಲರಿಗೂ ಬೇಕು, ಮಂತ್ರಿಗಿರಿ ನೀಡಿದ್ರೆ ಚೆನ್ನಾಗಿ ಮಾಡಿ ತೋರಸ್ತಿನಿ ಎಂದರು. ಅಧಿಕಾರ ಹಂಚಿಕೆ ಬಗ್ಗೆ ನಮಗೆ ಮಾತನಾಡದಂತೆ ನಮ್ಮ ನಾಯಕರು ಹೇಳಿದ್ದಾರೆ. ಹೈಕಮಾಂಡ್ ನಿಂದ ಎಲ್ಲರಿಗೂ ಸೂಚನೆ ಇದೆ. ನಮ್ಮಲ್ಲಿ ಹೊಂದಾಣಿಕೆ ಇದೆ. ಯಾವುದೇ ಸಮಸ್ಯೆ ಇಲ್ಲ ಎಂದರು.