ಹುಬ್ಬಳ್ಳಿ: ಪೈಲಟ್ಗಳ ಕೊರತೆಯಿಂದಾಗಿ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಇದರಿಂದ ನೂರಾರು ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಳಿಗಾಗಿ ಇಂಡಿಗೋ ವಿಮಾನ ಸಂಸ್ಥೆ ಕ್ಷಮೆಯಾಚಿಸಿದೆ.ವಾಣಿಜ್ಯನಗರಿ ಹುಬ್ಬಳ್ಳಿಗೂ ಈ ವಿಮಾನ ಹಾರಾಟದ ಸಮಸ್ಯೆಯ ಬಿಸಿ ತಟ್ಟಿದೆ. ವಿಮಾನಗಳ ರದ್ದತಿಯಿಂದಾಗಿ ಇಲ್ಲಿ ಒಂದು ಆರತಕ್ಷತೆ ಕಾರ್ಯಕ್ರಮಕ್ಕೆ ಬಹುದೊಡ್ಡ ಸಂಕಷ್ಟ ಎದುರಾಗಿತ್ತು. ದಿನನಿತ್ಯ ಹುಬ್ಬಳ್ಳಿಯಿಂದ ಬೇರೆ ಬೇರೆ ಭಾಗಗಳಿಗೆ 6 ಇಂಡಿಗೋ ವಿಮಾನಗಳು ಹಾರಾಟ ನಡೆಸುತ್ತಿದ್ದು, ಪ್ರತಿದಿನ 1400ಕ್ಕೂ ಅಧಿಕ ಪ್ರಯಾಣಿಕರು ಹುಬ್ಬಳ್ಳಿಯಿಂದ ಹೊರಗೆ ಹಾಗೂ ಒಳಗೆ ಪ್ರಯಾಣಿಸುತ್ತಿದ್ದರು.