ಕಲಬುರಗಿ : ಆಳಂದ ತಾಲೂಕಿನ ವಿವಿಧೆಡೆ ಕೆಕೆಆರ್ಡಿಬಿ ವತಿಯಿಂದ ಕೈಗೊಳ್ಳಲಾದ ಕಳಪೆ ಕಾಮಗಾರಿ ವಿರುದ್ಧ ಶಾಸಕ ಬಿಆರ್ ಪಾಟೀಲರೇ ಧ್ವನಿ ಎತ್ತಬೇಕಿತ್ತು.. ಆದರೆ ಅವರೇ ಮೌನ ವಹಿಸಿದ್ದಾರೆಂದು ಶಾಸಕ ಬಿಆರ್ ಪಾಟೀಲ್ ವಿರುದ್ಧ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ವಾಗ್ದಾಳಿ ನಡೆಸಿದ್ದಾರೆ.. ಡಿ4 ರಂದು ಮಧ್ಯಾನ 3 ಗಂಟೆಗೆ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ತೆಲ್ಕೂರ್, ಈ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಆಗ್ತಿಲ್ಲವೆಂದು ಬಿಆರ್ ಪಾಟೀಲ್ ಹೇಳಿದ್ರು.. ಮತ್ತೇ ಏನಕ್ಕೆ ನೀವು ಸಿಎಂ ಸಲಹೆಗಾರರಾಗಿ ಮುಂದುವರಿದ್ರಿ ಅಂತಾ ಬಿಆರ್ ಪಾಟೀಲ್ ವಿರುದ್ಧ ತೆಲ್ಕೂರ್ ಕಿಡಿಕಾರಿದ್ದಾರೆ.