ಜೋಯಿಡಾ : ನೆರೆಯ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಗೋಮಾಂಸ ಸಾಧಿಸುತ್ತಿದ್ದ ವಾಹನವನ್ನು ಜೋಯಿಡಾ ತಾಲೂಕಿನ ಅನ್ಮೋಡಾದಲ್ಲಿ ರಾಮನಗರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ಎರಡರಿಂದ ಎರಡುವರೆ ಗಂಟೆ ಸುಮಾರಿಗೆ ನಡೆದಿದೆ ಇನ್ನೋವಾ ಕಾರಿನಲ್ಲಿ ಕರ್ನಾಟಕದಿಂದ ಗೋವಾಕ್ಕೆ ಗೋಮಾಂಸ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಕ್ರಮವಾಗಿ ಗೋಮಾಂಸವನ್ನು ಗೋವಾಕ್ಕೆ ಸಾಗಾಟ ಮಾಡುತ್ತಿದ್ದಾಗ ರಾಮನಗರ ಪೊಲೀಸರು ಅನ್ಮೋಡಾದಲ್ಲಿ ವಾಹನವನ್ನು ತಡೆಯಲು ಪ್ರಯತ್ನಿಸಿದರು, ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ಗೋವಾಕ್ಕೆ ಪರಾರಿಯಾಗಿದ್ದನು. ನಂತರ ರಾಮನಗರ ಪೊಲೀಸರು ಗೋವಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.