ಆನೇಕಲ್: ಪರಪ್ಪನ ಅಗ್ರಹಾರದಲ್ಲಿ ಖೈದಿಗಳ ಭರ್ಜರಿ ಟಪಾಂಗುಚ್ಚಿ ವಿಡಿಯೋ ವೈರಲ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಪ್ಪನ ಅಗ್ರಹಾರದ ಕಾರಾಗಾರದ ಖೈದಿಗಳ ಪೊಟೋ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಮ್ಯಾರಥಾನ್ ರೀತಿ ಜೈಲಿನ ವಿಡಿಯೋಗಳು ವೈರಲ್ ಆಗುತ್ತಿದೆ. ನಿನ್ನೆಯಷ್ಟೇ ರೇಪಿಸ್ಟ್ ಉಮೇಶ್ ರೆಡ್ಡಿ, ತರುಣ್ ಕೊಂಡೂರು, ಶಂಕಿತ ಉಗ್ರ ಶಕೀಲ್ ಜೈಲಿನ ವಿಡಿಯೋಸ್ ವೈರಲ್ ಆಗಿತ್ತು, ಸದ್ಯ ಮತ್ತಷ್ಟೂ ವಿಡಿಯೋಗಳು ವೈರಲ್ ಆಗುತ್ತಿದೆ. ಜೈಲಿನಲ್ಲಿ ಮದ್ಯಸೇವಿಸಿ ಡ್ಯಾನ್ಸ್ ಮಾಡೋ ವಿಡಿಯೋಗಳು ವೈರಲ್ ಆಗಿದೆ. ಸದ್ಯ ವೈರಲ್ ಆಗಿರೋ ವಿಡಿಯೋಗಳು ಪರಪ್ಪನ ಅಗ್ರಹಾರ ಜೈಲಿನದ್ದಾ.!? ಅಥವಾ ಬೇರೆ ಜೈಲಿನದ್ದಾ ಅನ್ನೋ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.