ಬಂಗಾರಪೇಟೆ: ಆಂಧ್ರದವರಿಗೆ 1ಅಡಿ ಜಾಗವು ಬಿಡುವ ಪ್ರಶ್ನೆಯೇ ಇಲ್ಲ: ಸುಣ್ಣಕುಪ್ಪ ಗ್ರಾಮದಲ್ಲಿ ಶಾಸಕಿ ರೂಪಕಲಾ ಶಶಿಧರ್
ರಾಜ್ಯದ ಗಡಿ ಭಾಗದಲ್ಲಿ 25 ಎಕರೆ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ 10 ಕೋಟಿ ಅನುದಾನವನ್ನು ಮಂಜೂರು ಮಾಡಿಸಲಾಗಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.ತಾಲೂಕಿನ ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಕುಪ್ಪ ಕ್ರಾಸ್ ನಲ್ಲಿ ಸುಮಾರು 25 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಎಪಿಎಂಸಿ ಮಾರುಕಟ್ಟೆ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದರು. ಕೋಲಾರ ಜಿಲ್ಲೆಯಲ್ಲಿ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆಯನ್ನು ಈ ಜಾಗದಲ್ಲಿ ಮಾಡಲಾಗುವುದು, ಕೆಜಿಎಫ್ ಕ್ಷೇತ್ರದ ರೈತರಿಗೆ ಹಾಗೂ ಕೋಲಾರ ಜಿಲ್ಲೆಯ ರೈತರಿಗೆ ಈ ಮಾರುಕಟ್ಟೆ ಉಪಯುಕ್ತವಾಗಲಿದೆ ಎಂದರು.