ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮಲ್ಲೇಶ್ವರದ ಸುವರ್ಣ ಭವನದಲ್ಲಿರುವ ಸಂಸದರ ಕಛೇರಿಯಲ್ಲಿ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ನಾಗರಿಕರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿದರು. ಸಾರ್ವಜನಿಕರಿಂದ ಬಂದ ವಿವಿಧ ಕುಂದು–ಕೊರತೆಗಳು, ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಹಾಗೂ ತುರ್ತು ಪರಿಹಾರ ಅಗತ್ಯವಿರುವ ವಿಚಾರಗಳಿಗೆ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣದ ಸ್ಪಂದನೆಗಾಗಿ ಭರವಸೆ ನೀಡಿದರು.