ಮಳವಳ್ಳಿ : ಪಟ್ಟಣದಲ್ಲಿ ಜರುಗಲಿ ರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸ ವದ ಸಮಾರಂಭ ನಡೆಯಲಿರುವ ಮುಖ್ಯ ವೇದಿಕೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇ ರಿಸಲಾಯಿತು. ಇಲ್ಲಿನ ಶಾಂತಿ ಕಾಲೇಜು ಮುಂಭಾ ಗದ ಪುರಸಭಾ ನಿವೇಶನದ ಮೈದಾನದಲ್ಲಿ ಜರುಗಲಿರುವ ಜಯಂತಿ ಮಹೋತ್ಸವದ ಬೃಹತ್ ವೇದಿಕೆ ನಿರ್ಮಾಣ ಕಾರ್ಯಕ್ರಮಕ್ಕೆ ಭಾನುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಸುತ್ತೂರು ಮಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶ್ರೀ ಪಿ ಎಂ ನರೇಂದ್ರಸ್ವಾಮಿ ಸೇರಿದಂತೆ ಹಲವಾರು ಶ್ರೀಗಳು ಗಣ್ಯರು ಭಾಗವಹಿಸಿದ್ದರು.