ಗುಂಡ್ಲುಪೇಟೆ: ಗೋಪಾಲಸ್ವಾಮಿ ಬೆಟ್ಟ ಸಮೀಪ ರಸ್ತೆಬದಿಯೇ ನಿಂತ ಗಜರಾಜ...! ಭಕ್ತರ ಮೊಬೈಲ್ ನಲ್ಲಿ ಸೆರೆಯಾಯ್ತು ದೃಶ್ಯ
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಹಿಮದ ರಾಶಿ ಹೊದ್ದು ಮಲಗಿದ್ದು, ಪ್ರವಾಸಿಗರಿಗೆ ಕಾಶ್ಮೀರದಂತೆ ಭಾಸವಾಗುತ್ತಿದೆ. ಈ ನಡುವೆ ರಸ್ತೆಬದಿಯೇ ಗಜರಾಜನನ್ನು ಕಂಡು ಭಕ್ತರು ರೋಮಾಂಚನಗೊಂಡಿದ್ದಾರೆ. ದೇವಾಲಯ ಆವರಣಕ್ಕೆ ಬರುತ್ತಿದ್ದ ಈ ಆನೆಯನ್ನು ಅರಣ್ಯ ಇಲಾಖೆ ಹರಸಾಹಸ ಪಟ್ಟು ಓಡಿಸಿ ಸೋಲಾರ್ ಬೇಲಿ ಅಳವಡಿಸಿದ ಬಳಿಕ ಆವರಣಕ್ಕೆ ಬರುವುದು ತಪ್ಪಿದೆ. ಆದರೆ, ರಸ್ತೆಬದಿ ಮೇಯುತ್ತಾ ನಿಂತಿದ್ದ ಕಾಡಾನೆಯನ್ನು ಕಂಡ ಭಕ್ತರು ಪುಳಕಿತರಾಗಿದ್ದಾರೆ.