ಮುಂಡಗೋಡ: ಅಕ್ರಮವಾಗಿ ಮಾದಕ ವಸ್ತುವಾದ ಚರಸ್ ಅನ್ನು ಬೈಕ್ನಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪಟ್ಟಣದ ಸುಭಾಷನಗರ ನಿವಾಸಿ ಸಚೀನ ಟೆಕ್ಬಹದ್ದೂರ ಗೋರ್ಖಾ ಬಂಧಿತ ಆರೋಪಿಯಾಗಿದ್ದಾನೆ.