ದಾಂಡೇಲಿ: ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಮಿಂಚಿದ ದಾಂಡೇಲಿಯ ಹರ್ಷಲ್ ಸಂಜೀವ್ ಮುನಿಸ್ವಾಮಿ
ದಾಂಡೇಲಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಡಿ ಹೊಸಪೇಟೆಯಲ್ಲಿ ನಡೆದ 14 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕೆನರಾ ವೆಲ್ಪೇರ್ ಟ್ರಸ್ಟಿನ ನಗರದ ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಹರ್ಷಲ್ ಸಂಜೀವ್ ಮುನಿಸ್ವಾಮಿ ಈತನು ರಾಜ್ಯಕ್ಕೆ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡು ಶಾಲೆಗೆ ಹಾಗೂ ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾನೆ. ಈತನು ದಾಂಡೇಲಿಯ ಸುಭಾಷ್ ನಗರದ ನಿವಾಸಿ ಸಂಜೀವ್ ಮುನಿಸ್ವಾಮಿಯವರ ಸುಪುತ್ರನಾಗಿದ್ದು, ಈತ ಹಳಿಯಾಳದ ಕುಸ್ತಿ ವಸತಿ ಶಾಲೆಯಲ್ಲಿ ಕುಸ್ತಿ ತರಬೇತಿಯನ್ನು ಪಡೆಯುತ್ತಿದ್ದಾನೆ.