ದಾಂಡೇಲಿ: ಸೇವಾ ಪಾಕ್ಷಿಕ ನಿಮಿತ್ತ ಬಿಜೆಪಿಯಿಂದ ಕುಳಗಿ ರಸ್ತೆಯ ನದಿ ಹತ್ತಿರ ಸ್ವಚ್ಚತಾ ಶ್ರಮದಾನ
ದಾಂಡೇಲಿ : ಸೇವಾ ಪಾಕ್ಷಿಕ ನಿಮಿತ್ತವಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ದಾಂಡೇಲಿ ನಗರದ ಕುಳಗಿ ರಸ್ತೆಯ ನದಿಯ ಹತ್ತಿರ ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಪಕ್ಷದ ದಾಂಡೇಲಿ ಮಂಡಲ ಹಾಗೂ ಯುವ ಮೋರ್ಚಾದ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಶ್ರಮದಾನದ ಬಳಿಕ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸೇವಾ ಪಾಕ್ಷಿಕ ಅಭಿಯಾನದ ಸಹ ಸಚಾಲಕ ಮಂಗೇಶ್ ದೇಶಪಾಂಡೆ ಮತ್ತು ಬಿಜೆಪಿ ಮಂಡಳದ ಅಧ್ಯಕ್ಷ ಬುದವಂತಗೌಡ ಪಾಟೀಲ್ ಅವರು ಮಾತನಾಡಿದರು.