ಪಂಚಮಸಾಲಿಗರ ಮೇಲೆ ಹಲ್ಲೆ ಖಂಡಿಸಿ ಡಿ 10 ರಂದು ಮೌನ ಪ್ರತಿಭಟನೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು. ಡಿ. 10 ರಂದು ಗಾಂಧಿ ಭವನದಿಂದ ಚನ್ನಮ್ಮ ವೃತ್ತದ ವರೆಗೆ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಪಂಚಮಸಾಲಿಗರ ಮಾರಣಾಂತಿಕ ಹಲ್ಲೆ ಖಂಡಿಸಲು ಈ ಮೌನ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ನಾಡಿನ ಎಲ್ಲ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು