ಶಿರಸಿ : ನಗರದ ನಿಲೇಕಣಿ ಭೀಮನ ಗುಡ್ಡದ ಹತ್ತಿರ ಪಡ್ಡೆ ಹುಡುಗರಿಂದ ಮೋಜು ಮಸ್ತಿ ನಡೆಯುತ್ತಿದ್ದು, ಇಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರ ಆಟಾಟೋಪಗಳು ನಡೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಸ್ಥಳೀಯ ಜನತೆಗೂ ತೀವ್ರ ತೊಂದರೆಯಾಗತೊಡಗಿದೆ ಶ್ರೀ ವೆಂಕಟರಾವ್ ನಿಲೇಕಣಿ ಕಾಲೇಜಿನ ಹತ್ತಿರ ಮತ್ತು ಅಲ್ಲೆ ಪಕ್ಕದಲ್ಲಿರುವ ನೀರಿನ ಶುದ್ಧೀಕರಣ ಘಟಕವು ಇದ್ದು ಅದರ ಅಕ್ಕ ಪಕ್ಕದಲ್ಲಿ ಮದ್ಯ ವ್ಯಸನಿಗಳು ಮೋಜು ಮಸ್ತಿ ಮಾಡಿ, ಕುಡಿದು ಖಾಲಿ ಮಾಡಿದ ಬಾಟಲಿಗಳನ್ನು ಎಲ್ಲೊಂದರಲ್ಲಿ ಎಸೆದು ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.