ಪಾಂಡವಪುರ : ವಾಸದ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಮನೆ ಸಂಪೂ ರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಪಾಂಡವ ಪುರ ತಾಲ್ಲೂಕಿನ ಅರುಳ ಕುಪ್ಪೆ ಗ್ರಾಮದಲ್ಲಿ ಜರು ಗಿದೆ. ಈ ಗ್ರಾಮದ ಮೂರ್ತಿ ಅವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಈ ದುರ್ಘ ಟನೆ ಜರುಗಿದ್ದು ಮನೆಯ ಸ್ನಾನದ ಕೋಣೆಯಲ್ಲಿ ಬಿಸಿ ನೀರು ಕಾಯಿಸ ಲೆಂದು ಹಚ್ಚಿದ್ದ ಬೆಂಕಿ ಆಕಸ್ಮಿಕ ವಾಗಿ ಬಟ್ಟೆಗೆ ತಗುಲಿ ಆ ಮೂಲಕ ಇಡೀ ಮನೆಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿ ಇಡೀ ಮನೆಯನ್ನು ಸುಟ್ಟು ಬೂದಿ ಮಾಡಿದ್ದು ಮನೆಯ ಜೊತೆಗೆ ಗೃಹ ಬಳಕೆ ಪದಾರ್ಥಗಳು ಅಪಾರ ಬೆಲೆ ಬಾಳುವ ವಸ್ತುಗಳು ಸಹ ಸುಟ್ಟು ಬೂದಿಯಾಗಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.