ಹುಬ್ಬಳ್ಳಿ: ಇಲ್ಲಿಯ ಉಣಕಲ್ನ ಶ್ರಿನಗರದಲ್ಲಿ ತನ್ನ ಮಗಳೇ 1.80 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ತಾಯಿಯು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೇಘಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೇಘಾ ತಾಯಿ ರಾಜೇಶ್ವರಿ ದೂರು ದಾಖಲಿಸಿದ್ದಾರೆ. ವಾಸದ ಮನೆಯ ಬೀರುವಿನಲ್ಲಿದ್ದ 3 ಗ್ರಾಂ ಕಿವಿಯೋಲೆ, 10 ಗ್ರಾಂ ಚಿನ್ನದ ಸರ, 5 ಗ್ರಾಂ ಉಂಗುರ ಕಳವು ಮಾಡಿಕೊಂಡು ಹೋಗಿದ್ದಾಳೆ ಎಂದು ಮೇಘಾ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.