ತುಮಕೂರು: ನಗರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ : ಕೇಂದ್ರ ಸಚಿವ ಸೋಮಣ್ಣ ಭಾಗಿ
ತುಮಕೂರು ನಗರದ ರೈಲು ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ ಕೇಂದ್ರ ಸಚಿವ ವಿ. ಸೋಮಣ್ಣ ಅವರು ನಿಲ್ದಾಣದ ಸ್ವಚ್ಛತಾ ಕಾರ್ಮಿಕರನ್ನ ಸನ್ಮಾನಿಸಿ ಗೌರವಿಸಲಾಯಿತು. ಬುಧವಾರ ಬೆಳಿಗ್ಗೆ 10:30 ರ ಸಮಯದಲ್ಲಿ ನಿಲ್ದಾಣದ ಟಿಕೇಟ್ ಕೌಂಟರ್ ಎದುರು ಈ ಸಮಾರಂಭ ನಡೆಯಿತು.ಸಮಾರಂಭದಲ್ಲಿ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದನಿಯಾ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ. ಹೆಚ್. ಹುಚ್ಚಯ್ಯ, ಮುಖಂಡ ಸತೀಶ್ ಸೇರಿದಂತೆ ಹಲವರಿದ್ದರು.