ಹೊನ್ನಾವರ: ಸಿಡಿಲು ಬಡಿದು ಮೃತ ಪಟ್ಟಿದ್ದ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಕಾಸರಕೋಡನಲ್ಲಿ ನೆರವು
ಹೊಟ್ಟೆ ಪಾಡಿಗಾಗಿ ಗೋವಾ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತ ಪಟ್ಟಿದ್ದ ಹೊನ್ನಾವರ ತಾಲೂಕಿನ ಕಾಸರಕೋಡ ನಿವಾಸಿ ಕೃಷ್ಣ ಗಣಪಯ್ಯ ಗೌಡ ಇವರ ಮನೆಗೆ ಗುರುವಾರ ಸಂಜೆ 4.30ಕ್ಕೆ ಭೇಟಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ಕುಟುಂಬಕ್ಕೆ ಆಧಾರವಾಗಿದ್ದ ಪತಿಯ ಅಗಲಿಕೆಯಿಂದ ದುಃಖದಲ್ಲಿದ್ದ ಪತ್ನಿಗೆ ಹಾಗೂ ತಾಯಿಗೆ ಧೈರ್ಯ ಹೇಳಿ, ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ನೀಡಿದರು.