ಅಡುಗೆಯವರು ಸಿಲಿಂಡರ್ ಆನ್ ಇಟ್ಟಿದ್ದೇ ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ಸಜೀವಿ ಅಂದ ಮಕ್ಕಳ ಶಾಲೆಯ ಶಿಕ್ಷಕ ಸುಖದೇವ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದ ಎಪಿಎಂಸಿ ಬಳಿಯ ಅಂದ ಮಕ್ಕಳ ಶಾಲೆಯ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸೋರಿಯಾಗಿದ್ದರಿಂದ ಬೆಂಕಿ ಅವಘಡ ಸಂಭವಿಸಿತ್ತು,ಸಕಾಲಕ್ಕೆ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಿದ್ದರಿಂದ ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.ನಾಲ್ಕು ತುಂಬಿದ್ದ ಸಿಲಿಂಡರಗಳ ಪೈಕಿ ಒಂದಕ್ಕೆ ಬೆಂಕಿ ತಗುಲಿತ್ತು ಎಂದು ತಿಳಿಸಿದ್ದಾರೆ.