ಯಲ್ಲಾಪುರ: ಡಿ. 8 ರಂದು ರೈತ ಸಭಾಭವನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ,ಶ್ರೀಕ್ಷೇತ್ರ ಕರ್ಕಿ ಮಠಾಧೀಶರಾದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಉಪಸ್ಥಿತಿ
ಯಲ್ಲಾಪುರ : ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ದೈವಜ್ಞ ಸಮಾಜದವತಿಯಿಂದ ಡಿ 8ರಂದು ದೈವಜ್ಞ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೈವಜ್ಞ ಹಿತವರ್ಧಕ ಸಂಘದ ಅಧ್ಯಕ್ಷ ಸುಬ್ರಾಯ ಶ್ರೀನಿವಾಸ ಅಣ್ವೇಕರ್ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ಕಿ ಮಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಆಗಮಿಸಲಿದ್ದು, ಸಮಾಜ ಬಾಂಧವರನ್ನು ಸಂದರ್ಶಿಸಿ ಮತ್ತು ಅವರ ಉತ್ತರಾಧಿಕಾರಿಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳನ್ನು ಪರಿಚಯಿಸಲಿದ್ದಾರೆ ಎಂದರು.ಪ್ರಮುಖರಾದ ಮಂಜುನಾಥ ಶೇಟ್,ಪ್ರಕಾಶ್ ಶೇಟ್ ಉಲ್ಲಾಸ ಪಾಟೀಲ್,ಗಿರೀಶ್ ರೇವಣಕರ,ಪೂಜಾ ಶೇಟ್,ವಂದನಾ ಶೇಟ್ ಇದ್ದರು.