ಹಾಸನ: ಗಣೇಶ ಮೆರವಣಿಗೆ ವೇಳೆ ಸಾವನ್ನಪ್ಪಿದ ಶಿವಯ್ಯನಕೊಪ್ಪಲು ಗ್ರಾಮದ ಚಂದನ್ ಕುಟುಂಬಕ್ಕೆ 1 ಲಕ್ಷ ಪರಿಹಾರ ಚೆಕ್ ನೀಡಿದ ಸಂಸದ ಶ್ರೇಯಸ್ ಪಟೇಲ್
Hassan, Hassan | Sep 17, 2025 ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಸಂಭವಿಸಿದ ಟ್ರಕ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಂಸದ ಶ್ರೇಯಸ್ ಪಟೇಲ್ ಅವರು ತಲಾ ಒಂದೊಂದು ಲಕ್ಷ ಪರಿಹಾರ ವಿತರಣೆ ಹಂಚಿಕೆ ಮಾಡುತ್ತಿದ್ದಾರೆ. ಬುಧವಾರ ಕಟ್ಟಾಯ ಹೋಬಳಿ ಶಿವಯ್ಯನಕೊಪ್ಪಲು ಗ್ರಾಮದ ಚಂದನ್ ಎಂಬುವರ ಮನೆಗೆ ತೆರಳಿ ೧ ಲಕ್ಷ ಪರಿಹಾರ ನೀಡಿ ನೊಂದಿರುವ ಕುಟುಂಬವನ್ನು ಸಂತೈಸಿದರು. ಇದೇ ರೀತಿಯಲ್ಲಿ ದುರಂತದಲ್ಲಿ ಮಡಿದ ಎಲ್ಲ ೧೦ ಜನರ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿರುವ ಶ್ರೇಯಸ್ ಪಟೇಲ್, ಗಾಯಾಳು ಕುಟುಂಬಗಳಿಗೆ ತಲಾ ೨೫ ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದರು.