ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಸರಿಸುಮಾರು 12 ಸಾವಿರಕ್ಕೂ ಅಧಿಕ ರೈತರಿಗೆ ಬೆಳೆ ಪರಿಹಾರ ಬಂದಿಲ್ಲ.. ಹೀಗಾಗಿ ಬೆಳೆ ಪರಿಹಾರ ಪಡೆಯದ ರೈತರು ಎನ್ಪಿಸಿಎಲ್ ಆಧಾರ್ ಲಿಂಕ್ ಆಗದ ಹಿನ್ನಲೆಯಲ್ಲಿ ಪರಿಹಾರ ಬಂದಿಲ್ಲ.. ಅಂತಹ ರೈತರು ಬ್ಯಾಂಕ್ಗೆ ಹೋಗಿ ಅಕೌಂಟ್ಗೆ ಆಧಾರ್ ಮತ್ತು ಎನ್ಪಿಸಿಎಲ್ ಲಿಂಕ್ ಮಾಡಿಸಬೇಕೆಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ.. ಡಿಸೆಂಬರ್ 5 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಯಾವುದೇ ರೈತರಿಗೆ ಪರಿಹಾರ ಬಂದಿಲ್ಲ ಅಂತಾ ಆತಂಕ ಪಡೋದು ಬೇಡ ಅಂತಾ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಸಲಹೆ ನೀಡಿದ್ದಾರೆ.