ಹೊಳಿ ಹೊಸುರ ಗ್ರಾಮದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ. ಬೈಲಹೊಂಗಲ ತಾಲೂಕಿನ ಹೊಳಿ ಹೊಸುರ ಗ್ರಾಮದಲ್ಲಿ ಮಂಗಳವಾರ ಸಂಜೆ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕ್ಕೊಂಡ ಪರಿಣಾಮ ಮನೆ ಸುಟ್ಟು ಕರಕಲಾದ ಘಟನೆ ನಡೆದಿದೆ. ಬೆಂಕಿ ಕೆನ್ನಾಲೆಗೆ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು,ಬಂಗಾರದ ಆಭರಣಗಳು ಸೇರಿ ನಗದು ಕೂಡಾ ಸುಟ್ಟು ಭಸ್ಮ ವಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಗ್ರಾಮದ ಬಾಳೇಸ ಹಜೇರಿ, ಕಿರಣ ಹಜೇರಿ, ಶೇಖರ ಹಜೇರಿ ಎನ್ನುವವರು ಮನೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ