ನನ್ನಲ್ಲಿ ಸಿದ್ದರಾಮಯ್ಯನವರಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಇಲ್ಲ. ನಾನಂತೂ ಗುಂಪು ಮಾಡೋಕೆ ಯಾವತ್ತೂ ಹೋಗಲ್ಲ ಎಂದು ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದರು. ಭಾನುವಾರ ಮಧ್ಯಾಹ್ನ ಸದಾಶಿವನಗರದಲ್ಲಿ ಮಾತನಾಡಿದ ಅವರು, ನಾನು ಡೆಲ್ಲಿಗೆ ಹೋಗಿದ್ದೆ, ಆದ್ರೆ ಒಬ್ಬ ಶಾಸಕರನ್ನೂ ನನ್ನ ಜೊತೆ ಕರ್ಕೊಂಡು ಹೋಗಿಲ್ಲ. ಕರಕೊಂಡು ಹೋಗಬಹುದಾಗಿತ್ತು, ಅದೇನು ದೊಡ್ಡ ಕೆಲಸ ಅಲ್ಲ. ಆದರೆ ಕರ್ಕೊಂಡು ಹೋಗಲಿಲ್ಲ. ನಾನು ಎಂಟು ಹತ್ತು ಜನರನ್ನ ಹಾಕೊಂಡು ಹೋಗಬಹುದು ಅದರಿಂದ ಏನೂ ಪ್ರಯೋಜನ ಆಗಲ್ಲ ಎಂದು ಹೇಳಿದರು.