ಬೆಂಗಳೂರು ಪೂರ್ವ: ಬೆಂಗಳೂರಿನ ಐಟಿಐ ಕಾರ್ಖಾನೆಯಲ್ಲಿ ರಾಜ್ಯೋತ್ಸವ ಸಂಭ್ರಮ: ಶೋಭಾ ಕರಂದ್ಲಾಜೆ ವಿಶೇಷವಾಗಿ ಉಪಸ್ಥಿತಿ
ಬೆಂಗಳೂರಿನ ದೂರವಾಣಿ ನಗರದ ಐಟಿಐ ಕಾರ್ಖಾನೆಯ ಪದ್ಮಭೂಷಣ ಡಾ. ಎಸ್. ಎಲ್. ಭೈರಪ್ಪ ಭವನದಲ್ಲಿ ಜರುಗಿದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಅವರು ವಿಶಿಷ್ಟ ಆಗಮನ ನೀಡಿ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಬಿ. ಎ. ಬಸವರಾಜ, ಐಟಿಐ ಲಿಮಿಟೆಡ್ನ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆದ ಶ್ರೀ ರಾಜೇಶ್ ರೈ, ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕ ಸಂಘ ಹಾಗೂ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಭಾಗವಹಿಸಿ ರಾಜ್ಯೋತ್ಸವದ ಸಂಭ್ರಮವನ್ನು ಮತ್ತಷ್ಟು ಭವ್ಯಗೊಳಿಸಿದರು.