ಕಲಬುರಗಿ : ಶ್ರೀ ದತ್ತಾತ್ರೇಯ ಜಯಂತಿ ಮತ್ತು ಹುಣ್ಣಿಮೆ ನಿಮ್ಮಿತ್ತ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ದತ್ತ ಜಯಂತಿಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗ್ತಿದೆ.. ಡಿ4 ರಂದು ಬೆಳಗ್ಗೆ 10 ಗಂಟೆಗೆ ದತ್ತನ ಭವ್ಯವಾದ ಮೂರ್ತಿಯನ್ನ ಹೊತ್ತ ಪಲ್ಲಕ್ಕಿ, ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಗಿದೆ.. ಇನ್ನೂ ದತ್ತ ಜಯಂತ್ಯೋತ್ಸಕ್ಕೆ ಕಲಬುರಗಿ ಅಲ್ಲದೇ ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿ ದತ್ತನ ದರ್ಶನ ಪಡೆಯುತ್ತಿದ್ದಾರೆ.