ಗುಂಡ್ಲುಪೇಟೆ: ಬೇಗೂರು ಸಮೀಪದ ನಿಟ್ರೆ ಗ್ರಾಮದಲ್ಲಿ ಅದ್ದೂರಿಯಾಗಿ ನೆಡೆದ ಪಾರ್ವತಾಂಬಾ ಜಾತ್ರೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ನಿಟ್ರೆ ಗ್ರಾಮದಲ್ಲಿ ಮಂಗಳವಾರದಂದು ಪಾರ್ವತಾಂಬಾ ಜಾತ್ರೆ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆಯ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣವಿದ್ದು, ಬೀದಿಗಳು ಹಾಗೂ ಬಡಾವಣೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಗಳ ಮುಂದೆಲ್ಲ ಮಹಿಳೆಯರು ರಂಗೋಲಿ ಇಟ್ಟು, ಹೂವಿನ ಅಲಂಕಾರದಿಂದ ಶೃಂಗಾರಿಸಿ ಸಂಭ್ರಮಿಸಿದರು. ಅಲ್ಲದೆ ಗ್ರಾಮದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ, ಗ್ರಾಮಸ್ಥರು ಹಾಗೂ ಹೊರಗಿನ ಸಂಬಂಧಿಕರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆ, ಹಾಗೂ ಉತ್ಸವಗಳಲ್ಲಿ ತೊಡಗಿದರು.ಸ್ಥಳೀಯರು ಹಾಗೂ ನೆರೆಹೊರೆ ಗ್ರಾಮಗಳಿಂದ ಬಂದ ಭಕ್ತರ ಸಹಭಾಗಿತ್ವದಿಂದ ಈ ವರ್ಷದ ಪಾರ್ವತಾಂಬಾ ಜಾತ್ರೆ ನೆಡೆಯಿತು