ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ. ಆಸ್ತಿ ವಿಚಾರಕ್ಕೆ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದ್ದು. ಆರೋಪಿ ಪತ್ತೆಗೆ ಶ್ವಾನದಳದಿಂದ ಪರಿಶೀಲನೆ ಮಾಡಲಾಯಿತು. ಹುಬ್ಬಳ್ಳಿಯ ಬ್ರಹ್ಮಗಿರಿ ಕಾಲೋನಿಯಲ್ಲಿ ನಡೆದಿದೆ. ನಿಂಗವ್ವ ಮುಳಗೋಡ (75) ಕೊಲೆಯಾದ ವೃದ್ದೆ. ಆಸ್ತಿ ವಿಚಾರಕ್ಕೆ ಕೊಲೆ ಎಸಗಿರುವ ಶಂಕೆ ಮೂಡಿದೆ.ಆರೋಪಿಯ ಪತ್ತೆ ಹಚ್ಚಲು ಪೊಲೀಸರು ಶ್ವಾನದಳ ದಿಂದ ಪರಿಶೀಲನೆ ಮುಂದಾಗಿದ್ದಾರೆ.