ಬೆಂಗಳೂರು ಉತ್ತರ: ಬಿಜೆಪಿ ಮತದ ಹಕ್ಕು ಕಸಿಯುತ್ತಿದ್ದಾರೆ: ನಗರದಲ್ಲಿ ಡಿ.ಕೆ ಸುರೇಶ್
ರಾಹುಲ್ ಗಾಂಧಿ ಸುದ್ದಿಗೋಷ್ಠಿ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, ಸದ್ಯಕ್ಕೆ ನಾನು ಬೆಂಗಳೂರಿನಲ್ಲಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಕ್ರಮ ಮತದಾರರ ಕೈ ಬಿಟ್ಟಿದ್ದಾರೆ. 60 ಲಕ್ಷ ಮತದಾರರನ್ನ ಕೈ ಬಿಟ್ಟಿದ್ದಾರೆ ಅಂತಿದೆ. ಅದರ ಬಗ್ಗೆ ಬಿಡುಗಡೆ ಮಾಡಬಹುದೇನೋ? ಬಿಜೆಪಿ ಅವರು ಮತದ ಹಕ್ಕು ಕಸಿಯುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡ್ತಿದೆ. ಇದರ ಬಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಜನಕ್ಕೆ ಮಾಹಿತಿ ಕೊಡಬೇಕಾಗಿರೋದು, ಅವರನ್ನ ಅರಿವು ಮೂಡಿಸಬೇಕಾಗಿರೋದು. ನಮ್ಮ ಕಾಂಗ್ರೆಸ್ ನಾಯಕರ ಮುಖ್ಯ ಕರ್ತವ್ಯ ಎಂದರು.