ಬೆಂಗಳೂರು ದಕ್ಷಿಣ: jp ನಗರದಲ್ಲಿ ಒಂದೇ ಜಾಗದಲ್ಲಿ ಒಂದು ಗಂಟೆ ವಿಮಾನ ರೌಂಡ್ಸ್! ಜನರಲ್ಲಿ ಶುರುವಾಯ್ತು ಢವ ಢವ! ಅಷ್ಟಕ್ಕೂ ಆಗಿದ್ದೇನು?
JP ನಗರದಲ್ಲಿ ಒಂದೇ ಜಾಗದಲ್ಲಿ ವಿಮಾನ ರೌಂಡ್ಸ್ ಹಾಕಿದೆ. ಸುಮಾರು ಒಂದು ಗಂಟೆಗಳ ಕಾಲ ಏರ್ ಇಂಡಿಯಾ ವಿಮಾನ ರೌಂಡ್ಸ್ ಹಾಕಿದ್ದು ವಿಮಾನ ನಿರ್ವಹಣೆ ಸಲುವಾಗಿ ರೌಂಡ್ಸ್ ಹಾಕಿದೆ ಅಂತ ಸ್ಪಷ್ಟನೆ ಕೊಟ್ಟಿದೆ. ಹೀಗಿದ್ದರೂ ಜನರಲ್ಲಿ ಕೆಲ ಕಾಲ ಆತಂಕ ಎದುರಾಗಿತ್ತು. ಆದ್ರೆ ವಿಮಾನದಲ್ಲಿ ಬರೇ ಕ್ರೂ ಮೆಂಬರ್ಸ್ ಇದ್ರು..ಪ್ರಯಾಣಿಕರು ಯಾರು ಇರಲಿಲ್ಲ ಅಂತ ಏರ್ ಇಂಡಿಯಾ ಸ್ಪಷ್ಟನೆ ಕೊಟ್ಟಿದ್ದಾರೆ.