ಮಳವಳ್ಳಿ : ಮಂಡ್ಯ ನಗರದ ಮೈಶುಗರ್ ಶಾಲೆಗೆ 19.94 ಲಕ್ಷ ರೂ ಚೆಕ್ ವಿತರಿಸುವ ಮೂಲಕ ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಕೊಟ್ಟ ಮಾತು ಉಳಿಸಿ ಕೊಂಡಿದ್ದಾರೆ. ಮೈಶುಗರ್ ಶಾಲೆಯ ಶಿಕ್ಷಕರಿಗೆ ವೇತನ ನೀಡುವ ಸಲುವಾಗಿ ತಮ್ಮ ಸಂಸದರ ನಿಧಿಯಿಂದ ಅನುದಾನ ಕೊಡುವುದಾಗಿ ಮಾತು ಕೊಟ್ಟಿದ್ದ ಕುಮಾರಸ್ವಾಮಿ ಅದರಂತೆ ಮೈಶುಗರ್ ಶಾಲಾ ಆವರಣದಲ್ಲಿ ಶನಿವಾರ ಸಾಯಂಕಾಲ 4.30 ರ ಸಮಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ 19 ಲಕ್ಷದ 94 ಸಾವಿರ ರೂ ಚೆಕ್ ವಿವರಿಸಿದರು. ಈ ವೇಳೆ ಮಾತನಾಡಿದ ಅವರು ಮಾತು ಕೊಟ್ಟಂತೆ ಮೈಶುಗರ್ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ವೇತನಕ್ಕಾಗಿ 19 ಲಕ್ಷವನ್ನು ಶಿಕ್ಷಣ ಸಂಸ್ಥೆಗೆ ಕೊಟ್ಟಿದ್ದೇನೆ. ತಕ್ಷಣವೇ ಶಿಕ್ಷಕರಿಗೆ ಸಂಬಳ ಕೊಡಲು ತಿಳಿಸಿದ್ದೇನೆ ಎಂದರು.