ಬೆಂಗಳೂರು ಪೂರ್ವ: ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಡ್ರೈನೇಜ್ ವ್ಯವಸ್ಥೆ ಸುಧಾರಣೆ ಪೂರ್ಣಗೊಳಿಸಿ : ನಗರದಲ್ಲಿ ಲೋಖಂಡೆ ಸ್ನೇಹಲ್ ಸುಧಾಕರ್
ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ವಡ್ಡರಪಾಳ್ಯ ವೃತ್ತದಿಂದ ಹೆಣ್ಣೂರು-ಬಾಗಲೂರು ರಸ್ತೆವರೆಗೆ ಸುಮಾರು 5.3 ಕಿ.ಮೀ ಉದ್ದದ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ. ಎಸ್ ರಮೇಶ್ ರವರ ನಿರ್ದೇಶನದಂತೆ ನಡೆಸಲಾಯಿತು ಎಂದು ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್ ರವರು ತಿಳಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಣ್ಣೂರು-ಬಾಗಲೂರು ರಸ್ತೆ ವೈಟ್ ಟಾಪಿಂಗ್ ಪರಿಶೀಲಿಸಿದ ಅಪರ ಆಯುಕ್ತರು ಈ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುವುದು ಕಂಡುಬಂದಿದ್ದು, ವೈಟ್ ಟಾಪಿಂಗ್ ಕಾಮಗಾರಿ ವೇಳೆ ಸರಿಯಾದ ರಸ್ತೆ ಇಳಿಜಾರು ಕಲ್ಪಿಸುವ ಮೂಲಕ ರಸ್ತೆ ಮೇಲೆ ನೀರು ನಿಲ್ಲದಂತೆ ಡ್ರೈನೇಜ್ ವ್ಯವಸ್ಥೆ