ಹುಬ್ಬಳ್ಳಿ ನಗರ: ಹುಬ್ಬಳ್ಳಿ ಯುವಕನಿಗೆ ೧೯.೫೮ ಲಕ್ಷ ರೂ. ವಂಚನೆ:ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹುಬ್ಬಳ್ಳಿ: ಫೇಸಬುಕ್ ಪೇಜಿನಲ್ಲಿ ಹಾಕಿದ ಹಳೆಯ ಸ್ಮಾರ್ಟ್ ಫೋನ್ ಖರೀದಿ ಮಾಡಲು ಹೋದ ಹುಬ್ಬಳ್ಳಿ ಯುವಕನಿಗೆ ದೆಹಲಿ ಮೂಲದ ಅಪರಿಚಿತ ಬರೋಬ್ಬರಿ ೧೯,೫೮ ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ನಡೆದಿದೆ. ನಗರದ ಮೋಹನ್ ಎಸ್. ಎಂಬಾತನಿಗೆ ದೆಹಲಿ ಮೂಲದ ಜೆಜೆ ಕಮ್ಯೂನಿಕೇಷನ್ ಮನೀಶ್ ಜೈನ್ ಮೊಬೈಲ್ ಶಾಪ್ ಎಂಬ ಹೆಸರಿನ ವ್ಯಕ್ತಿ ವಂಚಿಸಿದ್ದಾನೆ. ಸ್ಯಾಮಸAಗ್ ಗ್ಯಾಲಕ್ಸಿ ಸ೨೩ ಅಲ್ಟಾç ೧೨ ೨೫೬ ಜಿಬಿ ಮೊಬೈಲ್‌ನ್ನು ೧೮೫೦೦ ರೂಗೆ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ನಂತರ ಮೊಬೈಲ್‌ನ್ನು ಆನ್‌ಲೈನ್ ಡೆಲಿವರಿ ಮಾಡಲು ೧೧೧೦೦ ರೂ ಹಾಕಿಸಿಕೊಂಡು ಉಳಿದ ಹಣಕ್ಕೆ ಕ್ಯೂಆರ್ ಕೋಡ್ ಕೇಳಿಕೊಂಡು ವಿವಿಧ ಮಾಹಿತಿ ಕೇಳಿ ೧೯,೫೮,೩೨೪ ರೂಪಾಯಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಿದ್ದಾರೆ.