ಮುಂಡಗೋಡ: ಕರ್ತವ್ಯ ಲೋಪ ಆರೋಪದಡಿ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ ಎ. ಅಮಾನತ್ತು ಮಾಡಲಾಗಿದೆ ಎಂದು ಡಿಡಿಪಿಐ ಡಿ.ಆರ್ ನಾಯ್ಕ ತಿಳಿಸಿದ್ದಾರೆ. ತಾಲೂಕಿನ ಚಿಗಳ್ಳಿಯ ದೇವಕ್ಕ ಛಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾಗಿದ್ದ ದಾಸಪ್ಪರವರ ವಿರುದ್ಧ ಇಲ್ಲಿನ ಮಹಿಳಾ ಶಿಕ್ಷಕಿಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು ಅಲ್ಲದೆ ಇತ್ತಿಚೆಗೆ ಶಿಕ್ಷಕಿಯರು ಪೊಲೀಸ ಠಾಣೆಯಲ್ಲಿ ಮಹಿಳಾ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ ಚಿಗಳ್ಳಿ ಎಂಬುವವರು ಕೊಲೆ ಬೆದರಿಕೆಯ ಕೇಸು ದಾಖಲಿಸಿದ್ದರು. ಕೆಲ ದಿನಗಳ ಹಿಂದೆ ಗ್ರಾಮಸ್ಥರು ಈ ಶಿಕ್ಷಕನ ವಿರುದ್ಧ ಪ್ರತಿಭಟನೆ ಕೂಡ ನಡೆಸಿ ಡಿಡಿಪಿಐ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.