ಹೊನ್ನಾವರ: ಗೇರುಸೊಪ್ಪದ ಸೂಳೆಮುರ್ಕಿ ಗ್ರಾಸ್ ಬಳಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ದೀಪನ್
ಹೊನ್ನಾವರ ತಾಲೂಕಿನ ಗೇರುಸೊಪ್ಪದ ಸೂಳೆಮುರ್ಕಿ ಗ್ರಾಸ್ ಬಳಿ ಅಪಘಾತವಾದ ಸ್ಥಳಕ್ಕೆ ಎಸ್ಪಿ ದೀಪನ್ ಅವರು ರವಿವಾರ ಸಂಜೆ 6ರ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಗೆ ಎಸ್ಪಿ ಅವರು ತೆರಳಿ ಗಾಯಾಳುಗಳ ಸ್ಥಿತಿ ಬಗ್ಗೆ ಮಾಹಿತಿ ಪಡೆದರು