ಬೆಂಗಳೂರು ಉತ್ತರ: ನಾವಿಬ್ಬರು ಮಾತಾಡಿದ್ರಷ್ಟೇ ಬೆಲೆ, ಕ್ರಾಂತಿ ಬಗ್ಗೆ ಯಾರೂ ಮಾತಾಡ್ಬೇಡಿ: ಡಿಕೆ ಶಿವಕುಮಾರ್
ನಾಯಕತ್ವ ಬದಲಾವಣೆ ವಿಚಾರವಾಗಿ ಯಾರು ದಣಿವಾಗೋದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ಕ್ರಾಂತಿ ಬಗ್ಗೆ ತಾವು ಹಾಗೂ ಸಿಎಂ ಮಾತಾಡಿದರಷ್ಟೇ ಅಧಿಕೃತ. ಅದಕ್ಕಷ್ಟೇ ಬೆಲೆ. ನಾವಿಬ್ರು ಏನು ಮಾತಾಡಿಕೊಂಡಿದ್ದೇವೆಯೋ ಅದರಂತೆ ನಡೆದುಕೊಳ್ತೇವೆ ಅಂತ ಡಿಕೆಶಿ ಗುಡುಗಿದ್ದಾರೆ. ಡಿಕೆಶಿ ಅವರ ಈ ಹೇಳಿಕೆ ಈಗ ಸದ್ದು ಮಾಡುತ್ತಿದೆ. ಹೇಳಿಕೆ ವೀರರಿಗೆ ವಾರ್ನ್ ಮಾಡಲು ಹೋಗಿ ಡಿಕೆಶಿ ಅಧಿಕಾರ ಒಪ್ಪಂದದ ಬಗ್ಗೆ ಮಹತ್ವದ ಸುಳಿವು ಬಿಟ್ಕೊಟ್ರಾ ಅನ್ನೋ ಚರ್ಚೆ ನಡೆಯುತ್ತಿದೆ.