ಮಳವಳ್ಳಿ : ತಾಲ್ಲೂಕಿನ ಹಲಗೂರು ಹೋಬಳಿಗೆ ಸೇರಿದ ಕುಂತೂರು ಕೆರೆ ಹಾಗೂ ಇನ್ನಿ ತರ ಕೆರೆಗಳಿಗೆ ನೀರು ತುಂಬಿಸುವ 28 ಕೋಟಿ ವೆಚ್ಚದ ಕುಂತೂರು ಏತ ನೀರಾವರಿ ಯೋಜನೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆದ ಶಾಸಕ ಪಿ ಎಂ ನರೇಂದ್ರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು. ಶುಕ್ರವಾರ ಸಾಯಂಕಾಲ 5 ಗಂಟೆ ಸಮಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭೂಮಿ ಪೂಜೆ ನೆರವೇರಿಸಿ ಕುಂತೂರು ಏತ ನೀರಾವರಿ ಯೋಜನೆಗೆ ಶಾಸಕರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಹಲಗೂರು ಹೋಬಳಿ ನೀರಾವರಿ ವಂಚಿತ ಪ್ರದೇಶವಾಗಿದ್ದು ಶಿಂಷಾ ನದಿಯಿಂದ ಏತಾವರಿ ನೀರಾವರಿ ಯೋಜನೆ ಮೂಲಕ ಈ ಭಾಗದ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದರು. ಇದರ ಜೊತೆಗೆ ಸಧ್ಯದಲ್ಲೇ ಹಲಗೂರು ಕೆರೆಗೆ ನೀರು ತುಂಬಿಸಿ ಸೌ