ಹುಬ್ಬಳ್ಳಿ:ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಡಿ ನ. ೧೫ರಂದು ನಗರದಲ್ಲಿ ಸರ್ದಾರ್ @150 ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು. ಅವರು ಗುರುವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ ೧೫೦ನೇ ಜನ್ಮದಿನದ ಅಂಗವಾಗಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ (MY Bharat) ಮೂಲಕ "ವಿಕಸಿತ ಭಾರತ್ ಪಾದಯಾತ್ರೆ" ಎಂಬ ರಾಷ್ಟ್ರೀಯ ಅಭಿಯಾನವನ್ನು ರಾಷ್ಟ್ರವ್ಯಾಪಿ ಕೈಗೊಂಡಿದೆ. ಈ ಅಭಿಯಾನದ ಉದ್ದೇಶ ರಾಷ್ಟ್ರಪ್ರೇಮವನ್ನು ಉತ್ತೇಜಿಸುವುದು. ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಆಳವಾಗಿ ಬಿತ್ತುವುದು ಮತ್ತು ಯುವಕರಲ್ಲಿ ಏಕತೆಯ ಆತ್ಮವನ್ನು ಬಲಪಡಿಸುವುದಾಗಿದೆ. ಪ್