ಯಲ್ಲಾಪುರ: ಗೋವಾದ ಪರ್ತಗಾಳಿ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ವೀರ ವಿಠಲ ಮಂದಿರದಲ್ಲಿರುವ ಯಲ್ಲಾಪುರದ ಗುಡಿಗಾರ ಕಲಾವಿದರ ಕಾಷ್ಠ ಕೆತ್ತನೆ ಕಲಾಕೃತಿಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಯಲ್ಲಾಪುರದ ಪ್ರಸಿದ್ಧ ಬಿಕ್ಕುಗುಡಿಗಾರ ಕಲಾಕೇಂದ್ರದ ಕಲಾವಿದರು ವೀರ ವಿಠಲ ಮಂದಿರದ 8 ಕರ್ಣ ಮುಚ್ಚಿಗೆ, 25 ಅಡಿ ಅಗಲದ ಗರ್ಭಗುಡಿಯ ದ್ವಾರ, ವೀರ ವಿಠಲ ಮಂದಿರದ ದ್ವಾರಗಳು, ಬೃಹತ್ ಕಿಡಕಿಗಳು, ಆನೆಯ ಮೂರ್ತಿಗಳು, 7 ಅಡಿ ಹನುಮಂತನ ಮೂರ್ತಿ, ಮಂದಿರದ ದ್ವಾರಕ್ಕೆ 24 ವಿಷ್ಣುವಿನ ಮೂರ್ತಿ, ಆಂಜನೇಯ ಮೂರ್ತಿಗಳು ಸೇರಿದಂತೆ ಹಲವಾರು ಕಲಾಕೃತಿಗಳನ್ನು ಮರದಲ್ಲಿ ಕೆತ್ತನೆ ಮಾಡುವ ಮೂಲಕ ರಚಿಸಿದ್ದಾರೆ.