ಕಬಿನಿ ನಾಲೆಯಲ್ಲಿ ವ್ಯಕ್ತಿಯೊಬ್ಬನ ಶವಪತ್ತೆಯಾದ ಘಟನೆ ಯಳಂದೂರು ತಾಲೂಕಿನ ಮಲಾರಪಾಳ್ಯದ ಕಬಿನಿ ನಾಲೆಯಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಗೆ ಅಂದಾಜು 50-55 ವರ್ಷ ವಯಸ್ಸಾಗಿದ್ದು ಬೊಕ್ಕತಲೆ, ಬಿಳಿ ತಲೆಗೂದಲು, ಬಿಳಿ ಮೀಸೆ ಹೊಂದಿದ್ದು ಶವ ಕೊಳೆಯುತ್ತಿರುವ ಸ್ಥಿತಿಯಲ್ಲಿದೆ. ಮೃತನ ಕತ್ತಿನಲ್ಲಿ ನೈಲಾನ್ ದಾರದ ಜೊತೆ ಕರಡಗ ಲಿಂಗ ಕಟ್ಟಿದ್ದು ಈತನ ಗುರುತು ಪತ್ತೆಯಾಗಿಲ್ಲ. ಯಳಂದೂರು ಪೊಲೀಸರು ಶವವನ್ನು ಸಿಮ್ಸ್ ಶವಾಗಾರಕ್ಕೆ ರವಾನಿಸಿ ಮೃತನ ಗುರುತು ಪತ್ತೆಗೆ ಮುಂದಾಗಿದ್ದಾರೆ. ಗುರುತು ಗೊತ್ತಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.