ಲಿಂಗಸೂರು: ಐದನಾಳರದೊಡ್ಡಿಯ ಅಪಾಯಕಾರಿ ರೀತಿಯಲ್ಲಿ ಹರಿವ ಹಳ್ಳದಲ್ಲೇ ನಿತ್ಯ ಶಾಲೆಗೆ ತೆರಳುವ ಮಕ್ಕಳು; ಯಾಮಾರಿದರೆ ಜೀವಕ್ಕೆ ಕುತ್ತು
ತಾಲೂಕಿನ ಗುಂತಗೋಳ ಗ್ರಾಮದ ಐದನಾಳರ್ ದೊಡ್ಡಿಯಿಂದ ಊರಿನ ಶಾಲೆಗೆ ಬರುವ ಶಾಲಾ ಮಕ್ಕಳು ಅಪಾಯಕಾರಿ ರೀತಿಯಲ್ಲಿ ಹರಿಯುವ ಹಳ್ಳ ದಾಟಿ ಸರಕಾರಿ ಶಾಲೆ ಸೇರಬೇಕಿದೆ. ಸೆ.16 ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಗುಂತಗೋಳ ಗ್ರಾಮದಲ್ಲಿರುವ ಶಾಲೆಗೆ ಐದನಾಳರ ದೊಡ್ಡಿಯಿಂದ ಬರಬೇಕಾದರೆ ಹಳ್ಳ ದಾಟಿ ಬರಬೇಕಿದೆ. ಕಳೆದ 20 ವರ್ಷಗಳಿಂದ ದಾರಿಯಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಳೆಗೆ ಹಳ್ಳದ ನೀರು ಹೆಚ್ಚಾಗಿ ಬಂದಿರುವ ಕಾರಣ ಹಳ್ಳ ದಾಟಲು ಆಗದೆ ಶಾಲಾ ಮಕ್ಕಳು ಕುಸಿದು ಬಿದ್ದಿದ್ದಾರೆ. ಹಲವಾರು ಬಾರಿ ಹಳ್ಳ ಬಂದಾಗ ಶಾಲೆ ಬಿಟ್ಟು ಮಕ್ಕಳು ಮನೆಯಲ್ಲೆ ಉಳಿದುಕೊಳ್ಳುತ್ತಾರೆ. ರಸ್ತೆ ಸೇರಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು. ದೊಡ್ಡಿಯಲ್ಲಿ 55 ಮತದಾರ