ಜೇವರ್ಗಿ ತಾಲೂಕಿನ ಬಳವಡಗಿ ಗ್ರಾಮದ ರೈತರು ಬೆಳೆ ಪರಿಹಾರದ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ನಗರದಲ್ಲಿ ಮಂಗಳವಾರ 11 ಗಂಟೆಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದ್ದಾರೆ. ಗ್ರಾಮದಲ್ಲಿ ಶೇಕಡಾ 50 ರಷ್ಟು ರೈತರಿಗೆ ಮಾತ್ರ ಪರಿಹಾರ ಧನ ನೀಡಲಾಗಿದ್ದು, ಉಳಿದ ರೈತರಿಗೆ ಯಾವುದೇ ಹಣ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆಡಳಿತ ಸಮರ್ಪಕ ಸಮೀಕ್ಷೆ ನಡೆಸುವಲ್ಲಿ ವಿಫಲವಾಗಿದ್ದು, ಕೆಲ ಅಧಿಕಾರಿಗಳು ತಹಶೀಲ ಕಚೇರಿಯಲ್ಲೇ ದಾಖಲೆಗಳನ್ನು ಸಂಗ್ರಹಿಸಿ ಅಸಮರ್ಪಕವಾಗಿ ವರದಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು. ಗ್ರಾಮ ಮಟ್ಟದಲ್ಲಿ ದಾಖಲಾತಿ ಒದಗಿಸಿದ ರೈತರಿಗೆ ಪರಿಹಾರ ಸಿಕ್ಕಿಲ್ಲ, ತಾವೇ ಕಚೇರಿಗೆ ತೆರಳಿ ದಾಖಲೆ ಸಲ್ಲಿಸಿದವರಿಗೆ ಮಾತ್ರ ಹಣ ಮಂಜೂರು ಮಾಡಲಾಗಿದೆ ಎಂದು ರೈತರು ದೂರಿದರು. ತಕ್ಷಣ ಕ್ರಮ ಕೈಗೊ