ಬೆಂಗಳೂರು ಉತ್ತರ: ಚಾಕು ದೊಣ್ಣೆ ಹಿಡಿದು ನಡು ರಸ್ತೆಯಲ್ಲಿ ವಿದ್ಯಾರ್ಥಿಗಳ ಬಡಿದಾಟ! ವಿಡಿಯೋ ಮಾಡುತ್ತಿದ್ದ ಜೊತೆಗಿದ್ದ ಹುಡುಗಿ! ಕಮಿಷನರ್ ಗೆ ಕ್ರಮಕ್ಕೆ ಆಗ್ರಹ
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲಿ ತಡರಾತ್ರಿ ವಿದ್ಯಾರ್ಥಿಗಳು ದೊಣ್ಣೆ ಚಾಕು ಹಿಡಿದು ಬಡಿದಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಬಡಿದಾಡಿರುವ ಘಟನೆ ಬೆಳಕಿಗೆ ಬಂದಿದ್ದು ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ನಗರ ಪೊಲೀಸ್ ಕಮಿಷನರ್ ಗೆ ಈ ಒಂದು ವಿಡಿಯೋಗೆ ಸಂಬಂಧಪಟ್ಟ ಹಾಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.