ಬೆಂಗಳೂರು ಉತ್ತರ: ಕನ್ನಡ ರಾಜ್ಯೋತ್ಸವದ ಸಂಭ್ರಮ: ಕಂಠೀರವ ಕ್ರೀಡಾಂಗಣದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಧು ಬಂಗಾರಪ್ಪ ಉಪಸ್ಥಿತಿ
ಇಂದು ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಶ್ರೀ ಮಧು ಬಂಗಾರಪ್ಪ ಅವರೊಂದಿಗೆ ಭಾಗವಹಿಸುವ ಅವಕಾಶ ದೊರೆಯಿತು. ಶಿಸ್ತು ಮತ್ತು ದೇಶಭಕ್ತಿಯ ಪ್ರತಿಬಿಂಬವಾದ ಶಾಲಾ ಮಕ್ಕಳ ಪರೇಡ್ಗೆ ಸಾಕ್ಷಿಯಾದ ಕ್ಷಣಗಳು ಮನಸಿಗೆ ಸ್ಪೂರ್ತಿ ನೀಡಿದವು. ಜಯ ಕರ್ನಾಟಕ ಮಾತೆ!