ಪಟ್ಟಣದ ಕಾಳಮ್ಮ ನಗರ, ಬಾಳಗಿಮನೆ ಹಾಗೂ ಗಾಂಧಿ ನಗರ ಪ್ರದೇಶಗಳಲ್ಲಿ ಹೊಸ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಭೂಮಿ ಪೂಜೆಯ ಮಂಗಳವಾರ ಮಧ್ಯಾಹ್ನ ಮೂರಕ್ಕೆ ಮೂಲಕ ಚಾಲನೆ ನೀಡಿದರು. ಒಟ್ಟು ಸುಮಾರು 36.51 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ಜಾರಿಗೊಳ್ಳಲಿದ್ದು, ಕಾಳಮ್ಮ ನಗರದ ಪ್ರೌಢಶಾಲೆಯ ಪಕ್ಕದ ರಸ್ತೆ (10 ಲಕ್ಷ), ದತ್ತ ಮಂದಿರದ ಪಕ್ಕದ ರಸ್ತೆ (20 ಲಕ್ಷ) ಹಾಗೂ ಗಾಂಧಿ ನಗರದಲ್ಲಿ ಶ್ರೀಪಾದ ಹೆಗಡೆ ಮನೆಯಿಂದ ಪದ್ಮಾ ಛಲವಾದಿ ಮನೆವರೆಗೆ (6.51 ಲಕ್ಷ) ಸಿ.ಸಿ ರಸ್ತೆ ನಿರ್ಮಾಣವಾಗಲಿದೆ.